Saturday, May 7, 2011

Waiting for you, all day, all night - where have you gone, wanna hug you so tight



This song has been written for the tune of "Aao na Aao Naa" of Kyun Ho Gaya Na movie read it accordingly to enjoy it.... ;)

ನೀ ಬಳಿಯಲಿ ಬಂದು ನಿಂತಾಗಲೇ, ಏಕೆ ವ್ಯಾಮೋಹ ಅತಿಯಾಗಿದೆ
ನಿನ್ನ ಕಂಗಳು ಏಕೆ ಕಂಡಾಗಲೇ, ಮನದಂಗಳದಿ ಬೆಳಕಾಗಿದೆ
ನಿನ್ನ ಮಾತು ಇಂಪಾಗಿ ಝೇಂಕರಿಸಿದೆ
ಮನವೀಗ ಗರಿಗೆದರಿದೆ
ಅಂದದ ನಗೆಯನು, ತೋರೆಯಾ ಚೆಲ್ಲೆಯಾ
ಬಾರೆಯಾ ಸನಿಹಕೆ, ಸನಿಹಕೆ ಬಾರೆಯಾ

ಹೂರಾಶಿ ಇರುವಂತ ಹೂದೋಟದೀ, ನಿನ್ನ ಕಂಪೇಕೆ ಬೀರಿದೆ
ಬೆಳದಿಂಗಳೇ ಇರದ ಗಗನದೀ, ನಿನ್ನ ಮೊಗವೇಕೆ ತೋರಿದೆ
ಪರಿ ಏತಕೆ, ಕಾರಣವ ಬಲ್ಲೆಯಾ
ಪರಿ ಏತಕೆ, ಕಾರಣವ ಬಲ್ಲೆಯಾ
ನಿನ್ನ ಸ್ಪರ್ಶ ಹಿತವಾದ ಒಲವೆನಿಸಿದೆ
ಮನ ರೋಮಾಂಚನಗೊಂಡಿದೆ
ಹೃದಯದ ಮಾತನು, ನುಡಿವೆಯಾ ತಿಳಿಸೆಯಾ
ಬಾರೆಯಾ ಸನಿಹಕೆ, ಸನಿಹಕೆ ಬಾರೆಯಾ

ಪ್ರತಿ ಘಳಿಗೆ ನಿನ್ನ ಸಂಗವಿರಬಯಸಿದೆ, ಮನಸೇಕೋ ಕಳವಳಿಸಿದೆ
ವಿರಹ ನಮ್ಮ ನಡುವೆ ಇನ್ನೇತಕೆ, ನಲ್ಲೆ ಬಾ ಮೆಲ್ಲಗೆ
ಮನಸಿನ ಭಾವನೆ, ತಿಳಿಸಲು ನಾ ಬಂದಿಹೆನು
ತೋಳಿನ ಆಸರೆ, ನೀಡುವೆಯಾ ನನಗಿಂದು
ನಿನ್ನ ನೋಡುವ ತವಕ ಹೆಚ್ಚಾಗಿದೆ
ನೀ ಒಡನೆ ಬಾ ಇಲ್ಲಿಗೆ
ಒಲವಿನ ಸಿಹಿಯನು, ತಿನಿಸೆಯಾ ಸವಿಸೆಯಾ
ಬಾರೆಯಾ ಸನಿಹಕೆ, ಸನಿಹಕೆ ಬಾರೆಯಾ

ನೀ ಬಳಿಯಲಿ ಬಂದು ನಿಂತಾಗಲೇ, ಏಕೆ ವ್ಯಾಮೋಹ ಅತಿಯಾಗಿದೆ
ನಿನ್ನ ಕಂಗಳು ಏಕೆ ಕಂಡಾಗಲೇ, ಮನದಂಗಳದಿ ಬೆಳಕಾಗಿದೆ
ನಿನ್ನ ಮಾತು ಇಂಪಾಗಿ ಝೇಂಕರಿಸಿದೆ
ಮನವೀಗ ಗರಿಗೆದರಿದೆ
ಅಂದದ ನಗೆಯನು, ತೋರೆಯಾ ಚೆಲ್ಲೆಯಾ
ಬಾರೆಯಾ ಸನಿಹಕೆ, ಸನಿಹಕೆ ಬಾರೆಯಾ

Comments and suggestions are most welcome....

No comments:

Post a Comment

Join me on Facebook