My fastest composition ever - only half an hour
ಅಂಗಳದಿ ಎಲ್ಲೆಲ್ಲು ಚೆಲ್ಲಿದೆ ಬೆಳದಿಂಗಳು
ಮನಸಿನ ನೋವನ್ನು ಬಂದಳಿಸಿದೆ ಈ ಅಲೆಗಳು
ಕಳೆಯಲಿ ಈ ಇರುಳು ಹೀಗೆಯೇ ಇನ್ನೆಂದು
ನಲ್ಮೆಯೇ ನನ್ನೊಡನೆ ಸಂಚರಿಸು ಬಾ ನೀ ಇಂದು
ತೆರೆದಿಹೆ ನನ್ನ ಮನಸಿನ ಬಾಗಿಲನು ನಿನಗೆಂದು
ನೆಲೆಸು ಬಾ ಈ ಮನದಲಿ ನೀ ಹೋಗದಿರೆ ಎಂದೆಂದು
ಅಲೆಗಳ ಈ ಬೆಳಕನು ಹೊರಚೆಲ್ಲಿದೆ ನಿನ್ನ ಕಂಗಳು
ನೀ ಹೇಳದ ಮಾತನ್ನು ಪಿಸುಗುಡುತಿದೆ ಬೆಳದಿಂಗಳು
ದಡ ಸೇರಿದ ಅಲೆಯಲ್ಲಿ ಚಂದ್ರಬಿಂಬವ ಕಂಡೆನು
ಕಾಣಿತು ನನಗಲ್ಲಿ ಬರಿ ನಗುಮುಖವು ನಿನ್ನದಿಂದು
ಅಂಗಳದಿ ಎಲ್ಲೆಲ್ಲು ಚೆಲ್ಲಿದೆ ಬೆಳದಿಂಗಳು
ಮನಸಿನ ನೋವನ್ನು ಬಂದಳಿಸಿದೆ ಈ ಅಲೆಗಳು
Comments are always invited .....